ವೂಲ್ಸಿ, ಥಾಮಸ್ ಕಾರ್ಡಿನಲ್
	1471-1530. ಇಂಗ್ಲೆಂಡಿನಲ್ಲಿ ಟ್ಯೂಡರ್ ಯುಗದಲ್ಲಿದ್ದ ಪ್ರಭಾವಿ ಧಾರ್ಮಿಕ ವ್ಯಕ್ತಿ. ಬಡಕುಟುಂಬದಲ್ಲಿ ಹುಟ್ಟಿದರೂ ತನ್ನ ಅಸಾಮಾನ್ಯ ಬುದ್ಧಿಮತ್ತೆಯಿಂದ ಮುಂದೆ ಬಂದ ಈತ ಇಂಗ್ಲೆಂಡಿನ ಟ್ಯೂಡರ್ ವಂಶದ ಎಂಟನೆಯ ಹೆನ್ರಿ (1491-1547) ಕಾಲದಲ್ಲಿ ಅತ್ಯಂತ ಪ್ರಭಾವಶಾಲಿಯಾದ ವ್ಯಕ್ತಿಯಾಗಿದ್ದ. ಚರ್ಚ್‍ನಲ್ಲಿ ಕೂಡ ಇವನ ಪ್ರಭಾವ ಸಾಕಷ್ಟಿತ್ತು. ಮೊದಲು ಧರ್ಮಗುರುವಾಗಿದ್ದ ಈತ ಮುಂದೆ ಕಾರ್ಡಿನಲ್ ಪದವಿಗೇರಿದ. ಅನಂತರ ಇಂಗ್ಲೆಂಡಿನ ದೊರೆಯ ಚಾನ್ಸಲರ್‍ನಾದ. ಹೆನ್ರಿಯ ಬಲವನ್ನು ಹೆಚ್ಚಿಸಲು ಫ್ರಾನ್ಸಿನ ದೊರೆ ಒಂದನೆಯ ಫ್ರಾನ್ಸಿಸ್ ಮತ್ತು ಸ್ಪೇನಿನ ಐದನೆಯ ಚಾಲ್ರ್ಸ್‍ರೊಂದಿಗೆ ಗುಪ್ತ ಒಪ್ಪಂದ ಮಾಡಿಕೊಂಡ. ಅರಸು ಮತ್ತು ಪೋಪ್ ಇಬ್ಬರೊಡನೆಯೂ ವಿಶೇಷ ಸಂಪರ್ಕವಿದ್ದು ಕೆಲಕಾಲ ಸರ್ವಾಧಿಕಾರಿಯಾಗಿದ್ದ. ಮುಂದೆ ತನ್ನ ಸಾಂಸಾರಿಕ ಸಮಸ್ಯೆಗಳಲ್ಲಿ ಸಹಕರಿಸಲಿಲ್ಲವೆಂದು ಹೆನ್ರಿಯ ತಿರಸ್ಕಾರಕ್ಕೆ ಪಾತ್ರನಾದ. ಅತ್ತ ಚಾಲ್ರ್ಸ್, ಫ್ರಾನ್ಸಿಸರು ಒಂದಾಗಿ ಬ್ರಿಟನ್ನಿನೊಡನಿದ್ದ ತಂತಮ್ಮ ಒಪ್ಪಂದಗಳನ್ನು ಅಲ್ಲಗಳೆದರು. ಇಲ್ಲಿಂದ ಇವನ ಅಧಃಪತನ ಪ್ರಾರಂಭವಾಗಿ ಅತ್ಯಂತ ದಾರುಣಾವಸ್ಥೆಯಲ್ಲಿ ಈತನ ಕೊನೆಯಾಯಿತು.								
	(ಜಿ.ಎಸ್.ಡಿ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ